';

Yaksha Shaalmala

Recommend
Share
Tagged in
Details

Yaksha Shaalmala | ಯಕ್ಷ ಶಾಲ್ಮಲಾ

ಯಕ್ಷಗಾನವು ಕರ್ಣಾಟಕದ ಹೆಮ್ಮೆಯ ಕಲೆ. ಭಾರತೀಯ ಕಲಾ ಪ್ರಪಂಚಕ್ಕೆ ಕರ್ಣಾಟಕ ನೀಡಿದ ಹಿರಿದಾದ ಕಲೆಗಳಲ್ಲಿ ಯಕ್ಷಗಾನಕ್ಕೆ ಮಹತ್ತರವಾದ ಸ್ಥಾನವಿದೆ.ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಆಶ್ರಯನೀಡಿ ಕಲೆಯನ್ನು ಪೋಷಿಸಿದ ಹಿರಿಮೆಯೂ ಸ್ವರ್ಣವಲ್ಲೀ ಮಠಕ್ಕಿದೆ. ಕರ್ನಲ್ ಮೆಕೆಂಜಿ ಸಂಗ್ರಹಿಸಿದ ಸಿರ್ಸಿ ಕೇಷಿಯತ್ತಿನಲ್ಲಿ (ಕ್ರಿ1799)ಸ್ವರ್ಣವಲ್ಲೀ ಮಠವು ನಾಲ್ಕು ನೂರು ವರ್ಷಗಳಿಗೂ ಮೊದಲು ಯಕ್ಷಗಾನ ಭಾಗವತರಿಗೆ, ತಾಳಮದ್ದಳೆ ಕಲಾವಿದರಿಗೆ ಸಂಮಾನಿಸಿದ ಉಲ್ಲೇಖವಿದೆ. ಯಕ್ಷಗಾನ ಕಲೆಯನ್ನು ಸ್ವರ್ಣವಲ್ಲೀ ಮಠದಲ್ಲಿ ಪ್ರತಿವರ್ಷವೂ ಪ್ರದರ್ಶಿಸಲಾಗುತ್ತಿದ್ದು ಕಲಾವಿದರಿಗೆ ಸಂಮಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇತ್ತೀಚಗೆ “ಯಕ್ಷಶಾಲ್ಮಲಾ” ಎಂಬ ನೊಂದಾಯಿತ ಸಂಸ್ಥೆ ಆರಂಭಿಸಲಾಗಿದ್ದು ಅದರ ಮೂಲಕ ಯಕ್ಷಗಾನ ಕಲೆ, ಕಲಾವಿದರಿಗೆ ಉತ್ತೇಜನ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ.

Info

MENU