';

Vyasana Mukta Samaja

Recommend
Share
Tagged in
Details

ವ್ಯಸನಮುಕ್ತ ಸಮಾಜ ಕಾರ್ಯಕ್ರಮ

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಪಾನ, ಧೂಮಪಾನ, ಮಾದಕ ದ್ರವ್ಯಗಳ ಸೇವನೆ, ತಂಬಾಕು - ಗುಟಕಾ ಸೇವನೆ,  ಮುಂತಾದ ವ್ಯಸನಗಳ ವೈದ್ಯಕೀಯ-ವೈಜ್ಞಾನಿಕ ವಿಶ್ಲೇಷಣೆ ಹಾಗೂ ಅವುಗಳ ದುಷ್ಪರಿಣಾಮಗಳ ಪರಿಕಲ್ಪನೆ ಉಂಟುಮಾಡುವ ಉದ್ದೇಶದಿಂದ ೧೯೯೭ರಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಪ್ರಾರಂಭದಲ್ಲಿ ವೈದ್ಯರು ವ್ಯಸನಗಳ ಬಗ್ಗೆ ಮಾಹಿತಿ ನೀಡುತ್ತಾರೆ.  ನಂತರ ಶ್ರೀಗಳವರು ಮನಸ್ಸಿನ ನಿಯಂತ್ರಣ ಹಾಗೂ ವ್ಯಕ್ತಿಯ ಸರ್ವಾಂಗೀಣ ಅಭ್ಯುದಯಕ್ಕೆ ಯೋಗ, ಪ್ರಾಣಾಯಾಮ, ಧ್ಯಾನ,  ಮುಂತಾದ ಆರ್ಷೇಯ ಸಾಧನೆಗಳು ಹೇಗೆ ಸಹಕಾರಿ ಎಂದು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ.  ಈ ಕಾರ್ಯಕ್ರಮಕ್ಕೆ ಕರ್ನಾಟಕದ ಮನಶ್ಶಾಸ್ರಜ್ಞರ ಸಂಘಟನೆ ಸ್ಪಂದನ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

Info

MENU