';

Sarwajnendra Saraswati Pratisthana

Recommend
Share
Tagged in
Details

Sarwajnendra Saraswati Pratisthana | ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಟಾನ

ಶ್ರೀ ಶ್ರೀ  ಸರ್ವಜ್ಞೇಂದ್ರರು ಬರೆದ “ಪ್ರಹ್ಲಾದ ಚರಿತಮ್”  ನಾಟಕ “ಯತಿಪರಿಚಯ” ವೆಂಬ ಸಂಸ್ಕೃತ ಕಾವ್ಯ :

ಮಾಹೇಂದ್ರೋ  ವೈದಿಕೇಂದ್ರೋ ವಿಯದಮಲ ತನುರ್ವೈಭವೇಂದ್ರಶ್ಚಿದೇಂದ್ರೋ

ಭಾಲೇಭಾಭಾವಕೇಂದ್ರೋ ಭವಭಯತಮಸೋಭಾಸ್ಕರೇಂದ್ರೋ ಭವೇಂದ್ರಃ|

ಇಂದ್ರಃ ಪ್ರಾಣೇಶ್ವರಾಣಾಂ ಗಗನ ಚರಮರುಜ್ಜೀವನೇಂದ್ರೋ ಕವೀಂದ್ರೋ

ಸರ್ವಜ್ಞೇಂದ್ರೋ  ದ್ವಿಜೇಂದ್ರೋ ಮಮ ಸ ಗಣಪತಿ ರ್ವೈದ್ಯುತೇಂದ್ರೋ ಹೃದೀಂದ್ರಃ || "

ಸ್ವರ್ಣವಲ್ಲೀ ಮಹಾಸಂಸ್ಥಾನವು ಅನೇಕ ಅಂಗ ಸಂಸ್ಥೆಗಳ ಮೂಲಕ ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿದೆ. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಪೀಠಕ್ಕೆ ಬಂದ ನಂತರ ಅನೇಕ ಅಂಗಸಂಸ್ಥೆಗಳು ನೋಂದಾಯಿತಗೊಂಡವು. ಅವುಗಳ ಮೂಲಕ ನಿರಂತರ ಕಾರ್ಯಗಳನ್ನು ಮಾಡಲು ಯೋಜನೆಗಳನ್ನು ರೂಪಿಸಲಾಗಿದೆ. ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನವು ಮಠದ ಮುಖ್ಯ ಅಂಗ ಸಂಸ್ಥೆಯಾಗಿದೆ. ಈ ಪ್ರತಿಷ್ಠಾನದ ಮೂಲಕ ಸಂಸ್ಕೃತೋತ್ಸವ, ಜಿಲ್ಲೆಯ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಅಂತರ್ ಮಹಾವಿದ್ಯಾಲಯ ಚರ್ಚಾಸ್ಪರ್ಧೆ, ಶಿಷ್ಯವೇತನ, ಉಚಿತ ಉಪನಯನ, ರಾಜ್ಯಮಟ್ಟದ ವಿಚಾರಸಂಕಿರಣಗಳು ಸಂಘಟನೆಯಲ್ಲಿವೆ. ಜಿಲ್ಲೆಯಾದ್ಯಂತ 500 ಕ್ಕೂ ಹೆಚ್ಚು ಸ್ಥಳಗಳಲ್ಲಿ “ಸಂಸ್ಕೃತ ಸಂಗಮ” ಕಾರ್ಯಕ್ರಮ ಜರುಗಿದೆ. ಶಿಕ್ಷಕರಿಗೆ ಪುನಶ್ಚೇತನ, ಜೀವನ ಶಿಕ್ಷಣ, ಅಧ್ಯನ ಶಿಬಿರಗಳನ್ನು ನಡೆಸಿದೆ. ಬಹಳ ಮುಖ್ಯವಾದುದು ಎಂದರೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವ್ಯಸನಮುಕ್ತ ಸಮಾಜಕ್ಕಾಗಿ ಕೈಗೊಂಡ ಜನಜಾಗೃತಿ ಅಭಿಯಾನ. ವ್ಯಸನಗಳು ಮನುಷ್ಯನಿಗೆ ಅಂಟಿಕೊಂಡು ಅವನ ವ್ಯಕ್ತಿತ್ವವನ್ನು ಹಾಳುನಾಡುತ್ತಿದ್ದು ಈ ಬಗ್ಗೆ ಗುರುಗಳು ತಿಳುವಳಿಕೆ ನೀಡಿ ಅದರಿಂದ ಮುಕ್ತರಾಗಲು ಪ್ರೇರಿಸುತ್ತಿದ್ದಾರೆ. ಧಾರ್ಮಿಕ ಭಾವನೆಗಳಿಂದ ಗುರುಗಳ ಪ್ರಭಾವದಿಂದ ತಮಗೆ ಅಂಟಿದ ವ್ಯಸಗಳಿಂದ ದುಶ್ಚಟಗಳಿಂದ ಮುಕ್ತಿ ಪಡೆದ ಅನೇಕ ಜನ ಸ್ವರ್ಣವಲ್ಲೀ ಮಟಕ್ಕೆ ನಡೆದುಕೊಳ್ಳುತ್ತಿದ್ದಾರೆ. ಗುರುಗಳ ಉಪದೇಶದಿಂದ ನೈತಿಕ ಸ್ಥೈರ್ಯ ತಂದುಕೊಂಡು ವ್ಯಸನಗಳಿಂದ ಬಿಡುಗಡೆಗೊಂಡ ಹೊಸ ಮನುಷ್ಯರಾಗುತ್ತಿದ್ದಾರೆ. ಶ್ರೀಗಳು ವ್ಯಸನ ಮುಕ್ತಿಯಾಗುವಂತೆ ಮಾಡಲು ಬೇರೆ ಬೇರೆ ಸ್ಥಳಗಳಲ್ಲಿ ಉಪನ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ತ್ರೀಭ್ರೂಣ ಹತ್ಯಾ ವಿರುದದ್ಧ ಶ್ರೀಗಳು ಜನಜಾಗೃತಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೆಣ್ಣು ಗಂಡು ಭೇದ ಭಾವ ತೊಲಗಿ ನಮ್ಮ ಸಮಾಜ ನೈತಿಕ ಧಾರ್ಮಿಕ ತಳಹದಿಯಲ್ಲಿ ಬೆಳೆಯಬೇಕು. ಪಾಪಕಾರ್ಯ ಮಾಡದಂತೆ ಗುರುಗಳು ಜನರನ್ನು ಎಚ್ಚರಿಸುತ್ತಿದ್ದಾರೆ.

ಶಿರಸಿಯಲ್ಲಿ ಯೋಗಮಂದಿರವನ್ನು ಕಟ್ಟಲಾಗಿದ್ದು ಅದರಲ್ಲಿ ಯೋಗ ಪ್ರಾಣಾಯಾಮ ಧ್ಯಾನದ ವಿವಿಧ ಬಗೆಗಳ ಕಲಿಕೆಯನ್ನು ವಿಶೇಷ ತರಬೇತಿಯ ಮೂಲಕ ಕೊಡಲಾಗುತ್ತಿದೆ.ಆಧ್ಯಾತ್ಮಿಕವಾದಧಾರ್ಮಿಕಪ್ರವಚನಗಳನ್ನೂ ಯೋಗ ಮಂದಿರದಲ್ಲಿ ಆಯೋಜಿಸಲಾಗುತ್ತಿದೆ. “ಯೋಗಮಂದಿರ” ನಿರ್ಮಾಣದಲ್ಲೂ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳೇ ಪ್ರೇರಕ ಶಕ್ತಿಯಾಗಿದ್ದಾರೆ.

Info

MENU