';

History Conference

Recommend
Share
Tagged in
Details

ಇತಿಹಾಸ ಸಮ್ಮೆಳನ

ಸ್ವರ್ಣವಲ್ಲೀ ಮಠದಲ್ಲಿ ವಿಚಾರ ಸಂಕಿರಣಗಳು, ವಿದ್ವದ್ಗೋಷ್ಠಿಗಳು, ವಿವಿಧಬಗೆಯ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿವೆ. ವಿದ್ವಾಂಸರು, ಸಾಹಿತಿಗಳು, ಕಲಾವಿದರ ಬಗೆಗೆ ಅಪಾರ ಗೌರವ ಶ್ರದ್ಧೆಯುಳ್ಳ ಈ ಮಹಾಸಂಸ್ಥಾನ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನದ  ಆಶ್ರಯದಲ್ಲಿ ಕರ್ಣಾಟಕ ಇತಿಹಾಸ ಅಕಾಡೆಮಿಯ ಹನ್ನೊಂದನೆಯ ವಾರ್ಷಿಕ ಸಮ್ಮೇಳನ ಮೂರು ದಿನಗಳ ಕಾಲ (25-27 ಅಕ್ಟೋಬರ್1997) ಅರ್ಥಪೂರ್ಣವಾಗಿ ಜರುಗಿತು. ನಾಡಿನ ಖ್ಯಾತ ಇತಿಹಾಸ ವಿದ್ವಾಂಸರು, ಸಂಶೋಧಕರು ಈ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಇತಿಹಾಸ, ಕಲೆ, ವಾಸ್ತುಶಿಲ್ಪ ಮೊದಲಾದ ವಿಷಯಗಳಿಗೆ ಸಂಬಂಧಿಸಿದ  ಮೌಲಿಕ  ಪ್ರಬಂಧಗಳನ್ನು ಮಂಡಿಸಿದರು.  ಸೋಂದಾ ಐತಿಹಾಸಿಕ ಶಿಲ್ಪಕಲೆಗಳ ರಕ್ಷಣೆಗೂ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು    ಮಾರ್ಗದರ್ಶನ ನೀಡಿದ್ದಾರೆ. ಸ್ವಾದಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಅನೇಕ ದೇವಾಲಯಗಳು ಈಗ ಜೀರ್ಣಸ್ಥಿತಿಯಲ್ಲಿವೆ.ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗುಡಿ ಗೋಪುರಗಳನ್ನು, ದೇವಾಲಯಗಳನ್ನೂ ಸಂರಕ್ಷಣೆಮಾಡಲು ಜಾಗೃತ ವೇದಿಕೆಯ  ಸಂಸ್ಥೆಯನ್ನು ಗುರುಗಳ ಅಧ್ಯಕ್ಷತೆಯಲ್ಲಿ ಆರಂಭಿಸಲಾಗಿದೆ. ಇದರಿಂದ ಪ್ರಾಚೀನ ದೇವಾಲಯಗಳ ಸಂರಕ್ಷಣೆ  ಅಭ್ಯುದಯಕ್ಕೆ ಸ್ವರ್ಣವಲ್ಲೀ ಮಠವು ಉತ್ತೇಜನ ನೀಡಿದೆ.

ಸ್ವರ್ಣವಲ್ಲೀ ಮಠವು ಹಮ್ಮಿಕೊಂಡ ವಿವಿಧ ಸಂಸ್ಕಾರಗಳ ವಿಚಾರ ಸಂಕಿರಣಗಳು ಮಹತ್ತ್ವಪೂರ್ಣ ವಾದವುಗಳು. ಆಧುನಿಕ ಸಂದರ್ಭದಲ್ಲಿ ಧಾರ್ಮಿಕ ಸಾಮಾಜಿಕ ಸಂಸ್ಕಾರಗಳು ವ್ಯಕ್ತಿಜೀವನದಲ್ಲಿ ಬೀರುವ ಪ್ರಭಾವವನ್ನು ವಿಶ್ಲೇಷಿಸುವುದು ತುಂಬ  ಆವಶ್ಯಕವಾದುದು. ಸ್ವರ್ಣವಲ್ಲಿ ಮಠದ ಆಶ್ರಯದಲ್ಲಿ ವಿವಾಹ ಸಂಸ್ಕಾರ, ಕುರಿತಾದ ಸಮಾವೇಶದಲ್ಲಿ ವೈದಿಕ ವಿದ್ವಾಂಸರೂ ಜನಸಮಾನ್ಯರೂ ನೇರವಾಗಿ ಮುಖಾಮುಖಿ ಸಂವಾದಕ್ಕಿಳಿದು ಚರ್ಚಿಸಿದ್ದು ಗಮನಾರ್ಹವಾದದ್ದು. ಶ್ರೀಮಠದ ಆಶ್ರಯದಲ್ಲಿ ಅವರ ಸಂಸ್ಕಾರದ ಬಗ್ಗೆ ಗೋಕರ್ಣದಲ್ಲಿ ಪಂಡಿತ ಗೋಷ್ಠಿ ನಡೆಸಿ ಅದರ ಬಗೆಗೆ  ಮುಕ್ತಚರ್ಚೆ ನಡೆಸಲಾಗಿದೆ. ನಮ್ಮ ಇಂದಿನ ಜೀವನದಲ್ಲಿ ಸಂಸ್ಕಾರಗಳು ಕಳಚುವ ಕೊಂಡಿಗಳಾಗದೆ ಅವುಗಳಿಗಿರುವ  ಸಾಂಸ್ಕೃತಿಕ ಮಹತ್ತ್ವವನ್ನು ವಿದಿತ ಪಡಿಸಲು ಇವು ನೆರವು ನೀಡುತ್ತವೆ.

Info

MENU