';

Gramabhyudaya

Recommend
Share
Tagged in
Details

ಗ್ರಾಮಾಭ್ಯುದಯ ಸಮಿತಿ | Village Empowerment Committee

ಸ್ವರ್ಣವಲ್ಲೀ ಮಠದ ಗ್ರಾಮಾಭ್ಯುದಯ ಸಮಿತಿ (ರಿ) ವಿಶಿಷ್ಟವಾದ ಅಂಗ ಸಂಸ್ಥೆಯಾಗಿದೆ. ಗ್ರಾಮಗಳಲ್ಲಿರುವ ಕಡುಬಡವರು, ಅಶಕ್ತರು, ಹಿಂದುಳಿದವರು, ಆರ್ಥಿಕವಾಗಿ ಸಂಕಟದಲ್ಲಿರುವವರಿಗೆ ಉಚಿತ ವೈದ್ಯಕೀಯ ಯೋಜನೆ ರೂಪಿಸಲಾಗಿದೆ.ಬಡವರಿಗೆ ಆರೋಗ್ಯಸೇವೆ ಕಲ್ಪಿಸಿ ಮಾನಸಿಕ ನೆಮ್ಮದಿ ನೀಡುವ ಸಮಾಜಸೇವೆ ಕಾರ್ಯಾವನ್ನು ಕೈಗೊಂಡಿದೆ. ಯಾವುದೇ ಜಾತಿ ವರ್ಗ ಭೇದವಿಲ್ಲದೇ ಬಡವರಿಗೆ ಸಹಾಯ ಮಾಡುವಂತೆ ಗುರುಗಳು ಮಾರ್ಗದರ್ಶನ ಮಾಡುತ್ತಿದ್ದಾರೆ.ಜೀವನದಲ್ಲಿ ಆತ್ಮಸ್ಥೈರ್ಯ ಪಡೆಯಲು ಉದಾರ ನೆರವು ನೀಡಲು ಸ್ವರ್ಣವಲ್ಲೀ ಮಠವು ಹೀಗೆ ಜನಸಮ್ಮುಖಿಯಾದ ಕಾರ್ಯವನ್ನು ನಡೆಸುತ್ತಿದೆ.

ಸ್ವರ್ಣವ್ಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ರಾಷ್ಟ್ರಖ್ಯಾತಿಯನ್ನು ಪಡೆದ ಯತಿವರ್ಯರು. ಅವರ ಪರಿಸರ ಹೋರಾಟದಿಂದ “ಹಸಿರು ಸ್ವಾಮಿ” ಎಂಬ ಕೀರ್ತಿಯನ್ನು ಪಡೆದಿದ್ದಾರೆ.ಶ್ರೀಗಳು ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಎರಡು ಬೃಹತ್ ಗೋಷ್ಠಿಗಳನ್ನೇರ್ಪಡಿಸಿ “ಭಾರತ ಸಂವಿಧಾನದಲ್ಲಿ ಆಧ್ಯಾತ್ಮಿಕತೆ”ಯನ್ನು ಅಳವಡಿಸಬೇಕೆಂದು ಪ್ರತಿಪಾದಿಸಿದರು. ಆಧ್ಯಾತ್ಮಿಕ ಚಿಂತಕರ , ಮುತ್ಸದ್ಧಿಗಳ ವಿಚಾರವಂತರ ಆಶಯವನ್ನು ಅತ್ಯಂತ ಸಮರ್ಥವಾಗಿ ಮಂಡಿಸುವ ಮೂಲಕ ಮತ್ತೊಮ್ಮೆ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ರಾಷ್ಟ್ರಖ್ಯಾತಿಯನ್ನು ಪಡೆದರು. ಸರ್ವಮತಧರ್ಮಗಳ ಚಿಂತಕರು ಈ ವಿಚಾರಮಂಡನಸಭೆಯಲ್ಲಿಉಪಸ್ಥಿತರಿದ್ದುದುಗಮನಿಸುವ ಸಂಗತಿಯಾಗಿದೆ.

ಬ್ರಹ್ಮವಿದ್ಯಾ ಸಂಸ್ಥಾನವನ್ನು ಆರಂಭಿಸುವ ಮೂಲಕ ವೇದವಿದ್ಯೆಗೆ ಮನ್ನಣೆ ತಂದುಕೊಡುವ ಕಾರ್ಯಗಳನ್ನು ಗುರುಗಳು ಆರಂಭಿಸಿದ್ದಾರೆ. ಸಂಸ್ಕೃತದ ದೊಡ್ಡ ಗ್ರಂಥಭಂಡಾರ ಶ್ರೀಮಠದಲ್ಲಿರುವುದಲ್ಲದೇ ಸುಸಜ್ಜಿತವಾದ ಅಧ್ಯಯನ ಸೌಲಭ್ಯವನ್ನು ವೇದವಿದ್ಯಾ ವ್ಯಾಸಂಗಿಗಳಿಗೆ ಒದಗಿಸಲಾಗಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಗಳವರ ಪೀಠಾರೋಹಣದ ದಶಮಾನೋತ್ಸವದ ಸುಸ್ಮರಣೆಗಾಗಿ ನಿರ್ಮಿತವಾದ ಅಕ್ಷಯ ಭವನ, ಸುಧರ್ಮ ಸಭಾಭವನ, ರಾಜಾಂಗಣಗಳು ಶ್ರೀಮಠದ ಸಾಂಸ್ಥಿಕ ವಿಕಾಸದ ನಿಟ್ಟಿನಲ್ಲಿ ಮಹತ್ತ್ವಪೂರ್ಣವಾದವುಗಳು.ಗೋಶಾಲೆ ಅನ್ನಪೂರ್ಣ ನಿಲಯವನ್ನು ಅಭಿವೃದ್ಧಿಪಡಿಸಿ ಮಠದ ಸರ್ವತೋಮುಖ ಬೆಳವಣಿಗೆಯನ್ನು ಕೈಕೊಳ್ಳಲಾಗಿದೆ. ಶ್ರೀಮಠದ ಕೃಷಿಕಾರ್ಯಗಳಲ್ಲೂ ಅದ್ಭುತ ಪ್ರಗತಿ ಸಾಧಿಸಲಾಗಿದೆ. ಗುರುಗಳು ಆಡಳಿತ ವಿಕೇಂದ್ರೀಕರಣ ಮಾಡುವ ಮೂಲಕ ವಿವಿಧ ಉಪಸಮಿತಿ , ಅಂಗ ಸಂಸ್ಥೆಗಳ ಮೂಲಕ ಆಡಳಿತ ವ್ಯವಸ್ಥೆ ಸುಗಮಗೊಳ್ಳುವಂತೆ ಮಾಡಿದ್ದಾರೆ.

ಸ್ವರ್ಣವಲ್ಲೀ ಮಹಾಸಂಸ್ಥಾನ ಹುಲೇಕಲ್ಲಿನಲ್ಲಿರುವ ಶ್ರೀದೇವಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಮಹಾವಿದ್ಯಾಲಯವನ್ನು ಶಿಕ್ಷಣಸಂಸ್ಥೆಯಾಗಿ ಸ್ವೀಕರಿಸಿದೆ. ಕರ್ಣಾಟಕದಲ್ಲಿ ತಾಂತ್ರಿಕ ವೈದ್ಯಕೀಯ ಸಂಸ್ಥೆಯನ್ನು ಆರಂಭಿಸುವುದರಲ್ಲಿ ಪೈಪೋಟಿ ನಡೆಯುತ್ತಿರುವ ಈಕಾಲದಲ್ಲಿ ಸ್ವರ್ಣವಲ್ಲೀ ಮಠವು ಭಾರತೀಯ ಸಂಸ್ಕೃತಿ ಪ್ರಸಾರದ ದೃಢಸಂಕಲ್ಪದಿಂದ ಋಷಿಸಂಸ್ಕೃತಿ ವಿದ್ಯಾಪ್ರಸಾರ ಮಾಡುವ ಘನಕಾರ್ಯ ಮಾಡುತ್ತಿರುವುದು ಅವರ ಮಹೋನ್ನತ ಆದರ್ಶದ ಪ್ರತೀಕವಾಗಿದೆ. ದೀಪವು ತನ್ನ ಪ್ರಭೆಯಿಂದ ಕತ್ತಲೆ ದೂರಮಾಡುವಂತೆ ಸ್ವರ್ಣವಲ್ಲೀ ಮಠವು ಸಂಸ್ಕೃತಿ ದೀಪವಾಗಿ ಬೆಳಕಿನ ಪ್ರಭೆ ಹರಡುತ್ತಲಿದೆ. ವೇದಾಂತ ವಿದ್ಯಾವಿದ್ವಾಂಸರೂ ತೇಜಸ್ವಿಗಳೂ ಸಮಾಜೋದ್ಧಾರಕ ಧಾರ್ಮಿಕ ಕಾರ್ಯಗಳಲ್ಲಿ ಅನುಪಮ ಆಸ್ಥೆಯುಳ್ಳ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳಲ್ಲಿ ದೊಡ್ಡ ಕರ್ತೃತ್ವ ಶಕ್ತಿಯಿದೆ. ಸದಾ ನಗುಮೊಗದ ಕ್ರಿಯಾಚೇತನರಾಗಿರುವ ಶ್ರೀಗಳು ತಮ್ಮ ವ್ಯಕ್ತಿತ್ವದ ಮಹೋನ್ನತ ಗುಣಗಳಿಂದ ಶಿಮಠದ ಶಿಷ್ಯಕೋಟಿಯನ್ನೂ ಶ್ರೀಮಠವನ್ನೂ ಬೆಳಕಿನೆಡೆಗೆ ಕೊಂಡೊಯ್ಯುತ್ತಿದ್ದಾರೆ. ಇಂದ್ರಿಯ ನಿಗ್ರಹ ಮನೋನಿಗ್ರಹಗಳಿಂದ ಎಲ್ಲ ರಾಗದ್ವೇಷಗಳನ್ನೂ ದೂರಮಾಡಿ ಸಂಯಮಿಗಳಾಗಿ ಸಮನ್ವಯ ಸಮತೂಕಗಳಿಂದ ಭಗವದ್ಗೀತೆಯಲ್ಲಿ ಹೇಳಿದ ಭಗವಂತನ ವಾಣಿಯಂತೆ ನಡೆಯುತ್ತಿದ್ದಾರೆ. ಹನ್ನೆರಡುನೂರು ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ಪುನರುತ್ಥಾನ ಮಾಡಿದಂತೆ ಈಗ ಆದಿಶಂಕರರು ತೋರಿದ ಮಾರ್ಗದಲ್ಲಿ ಮುನ್ನಡೆಯುತ್ತಿರುವ ನಮ್ಮೆಲ್ಲರ ಪ್ರೀತಿಯ ಸ್ವಾಮೀಜಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಸ್ವರ್ಣವಲ್ಲೀ ಮಹಾಸಂಸ್ಥಾನದ ದಿವ್ಯ ಪ್ರಭೆಯಾಗಿದ್ದಾರೆ. ಭಾರತೀಯ ಸಂನ್ಯಾಸ ಪರಂಪರೆಯ ಪರಮಾದರ್ಶಗಳನ್ನು ತಮ್ಮದಾಗಿಸಿಕೊಡ ಗುರುಗಳು ಸ್ವರ್ಣವಲ್ಲೀ ಮಠಸರ್ವಧರ್ಮ ಸಮಭಾವದ ಸಂಸ್ಕೃತಿ ಕೇಂದ್ರಬಿಂದುವೆಂದು ನಾವು ಅರಿಯುವಂತೆ ಮಾಡಿದ್ದಾರೆ. ಭಾರತದ ವಿವಿಧ ದರ್ಮಮತ ಪರಂಪರೆ ಸಂನ್ಯಾಸುಗಲನ್ನೂ ವಿಭೂತಿ ಚೇತನಗಳನ್ನೂ ಆದರದಿಂದ ಕಾಣುವ ಸೌಹಾರ್ದ ಸಮನ್ವಯ ವಿಚಾರಗಳನ್ನು ಪ್ರಕಟಿಸುವ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಅನುಷ್ಠಾನ ನಿರತರು.ಅಧ್ಯಯನ ತತ್ಪರರು. ಭಾರತೀಯತೆಯ ಪ್ರಾಚೀನ ಪರಂಪರೆಯನ್ನೂ ವಿಜ್ಞಾನಯುಗದ ಆಧುನಿಕತೆಯನ್ನೂ ಸಮಪ್ರಮಾಣದಲ್ಲಿ ಸಾಧಿಸುವ ಮೂಲಕ ಸ್ವರ್ಣವಲ್ಲೀ ಮಹಾಸಂಸ್ಥಾನವನ್ನು ಅಬಿವೃದ್ಧಿಗೊಳಿಸುತ್ತಿರುವ ಗುರುಗಳು ಪರಂಪರೆಮತ್ತು ಪ್ರಗತಿಯ ಪುರಸ್ಕರ್ತರಾಗಿದ್ದಾರೆ. ಸಂಪ್ರದಾಯ ಸಂಸ್ಕಾಗಳನ್ನೂ ಅದರ ಶ್ರೇಷ್ಠತೆಯ ಕಡೆಗೆ ಆಲೋಚಿಸುವಂತೆ ಮಾಡುವ ಮೂಲಕ ಗುರುಗಳು ನಮಗೆ ಆದರ್ಶರಾಗಿದ್ದಾರೆ.ಪರಿಸರ ಸಂರಕ್ಷಣೆ ಮಾನವಪ್ರೀತಿ ಸಮಾಜದ ಸಮ್ಮುಖಿಯಾದ ಕಾರ್ಯಗಳ ಮೂಲಕ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಭಕ್ತಕೋಟಿಯ ಬೆಳಕಾಗಿದ್ದಾರೆ.ಸ್ವರ್ಣವಲ್ಲೀ ಮಹಾಸಂಸ್ಥಾನ ನಮ್ಮ ಸಂಸ್ಕೃತಿಯ ಪರಂಪರೆಯ ಮಹಾಗುರು ಪೀಠವಾಗಿದೆ.

Info

MENU