';

Dhanyo Grahastashrama

Recommend
Share
Tagged in
Details

ಧನ್ಯೋ ಗೃಹಸ್ಥಾಶ್ರಮ (ದಂಪತಿ ಸಮಾವೇಶ) :

ಸಮಾಜದಲ್ಲಿ ಹೆಚ್ಚುತ್ತಿರುವ ಸ್ತ್ರೀ ಭ್ರೂಣಹತ್ಯೆ ಹಾಗೂ ಅದರ ಪರಿಣಾಮವಾಗಿ ಉಂಟಾಗುತ್ತಿರುವ ಸ್ತ್ರೀ - ಪುರುಷರ ಅನುಪಾತದಲ್ಲಿನ ತೀವ್ರ ವ್ಯತ್ಯಾಸ ವನ್ನು ತಡೆಗಟ್ಟಲು  ಹಾಗೂ ಸ್ವಸ್ಥ ಸಮಾಜ ನಿರ್ಮಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ವೈದ್ಯಕೀಯ, ಯೋಗ, ಜ್ಯೋತಿಷ್ಯ ಮುಂತಾದ ಶಾಸ್ತ್ರಗಳ ಆಧಾರದಲ್ಲಿ ಭ್ರೂಣಹತ್ಯೆಯ ದುಷ್ಪರಿಣಾಮಗಳು, ಸತ್ಸಂತಾನಕ್ಕೆ ಶಾಸ್ತ್ರ ಸೂತ್ರಗಳು, ಆಯುರ್ವೇದ ಚಿಕಿತ್ಸೆಗಳು, ಯೋಗ-ಪ್ರಾಣಾಯಾಮಗಳು, ಧಾರ್ಮಿಕ ಆಚರಣೆಗಳಲ್ಲಿ ಸ್ತ್ರೀಯರ ಪಾತ್ರ, ಮುಂತಾದ ವಿಷಯಗಳನ್ನು ಕುರಿತು ತಜ್ಞರ ಉಪನ್ಯಾಸ ಮತ್ತು ಸಮಾಲೋಚನೆ ಏರ್ಪಡಿಸಲಾಗುತ್ತದೆ. ಪೂಜ್ಯ ಶ್ರೀಗಳವರೂ ಕರ್ಮವಿಪಾಕ ಮತ್ತು ಶಾಸ್ತ್ರದ ಹಿನ್ನೆಲೆಯಲ್ಲಿ ಭ್ರೂಣಹತ್ಯೆಯಿಂದ ಆಗುವ ತೊಂದರೆಗಳನ್ನು ಕುರಿತು ವಿವರಿಸುತ್ತಾರೆ. 2007ರಿಂದ ಈವರೆಗೆ ಒಟ್ಟೂ 28 ಶಿಬಿರಗಳನ್ನು ಆಯೋಜಿಸಲಾಗಿದೆ.

Info

MENU