Kumari Samskruti Shibira

ನಮ್ಮ ಇಂದಿನ ಶಿಕ್ಷಣ ಪದ್ಧತಿ ಪಾರಂಪರಿಕ ಜ್ಞಾನ, ಅನುಭವ, ಆಚರಣೆಗಳಿಂದ ತುಂಬ ದೂರವಿದೆ. ಪಾರಂಪರಿಕ ಆಚರಣೆಗಳು ನೀಡುತ್ತಿದ್ದ ಭಾವನಾತ್ಮಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೂಲ ತಳಹದಿಯನ್ನು ಹೆಣ್ಣು ಮಕ್ಕಳಿಗೆ ರಚನಾತ್ಮಕವಾಗಿ ನೀಡುವ ಹಿನ್ನೆಲೆಯಲ್ಲಿ ೨೦೦೦ನೇ ಇಸವಿಯಲ್ಲಿ "ಕುಮಾರಿ ಸಂಸ್ಕೃತಿ ಶಿಬಿರ " ವನ್ನು ಪ್ರಾರಂಭಿಸಲಾಯಿತು. ಪ್ರತಿವರ್ಷ ಬೇಸಿಗೆಯ ರಜಾ ಅವಧಿಯಲ್ಲಿ ನಡೆಸಲ್ಪಡುವ ಈ ೧೫ ದಿನಗಳ ವಸತಿ ತರಬೇತಿ ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಭಜನೆ, ಭಗವದ್ಗೀತೆ, ಸ್ತೋತ್ರ ಪಠಣ, ಪಾರಂಪರಿಕ ಹಾಡುಗಳು, ರಂಗೋಲಿ, ಕರಕುಶಲ, ಮುಂತಾದವುಗಳನ್ನು ಕಲಿಸುವುದರ ಜೊತೆಗೆ ಇಂದಿನ ಸಂಕೀರ್ಣ ಸಂದರ್ಭದಲ್ಲಿ ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕುರಿತು ಉಪನ್ಯಾಸ ಮತ್ತು ಚರ್ಚೆಗಳನ್ನು ನಡೆಸಲಾಗುತ್ತದೆ. ಸ್ವತಃ ಪೂಜ್ಯ ಶ್ರೀಗಳವರು ಪಾತಂಜಲ ಯೋಗಸೂತ್ರದ "ಯಮ-ನಿಯಮ"ಗಳನ್ನು ಕುರಿತು ಬೋಧಿಸುವುದು ಈ ತರಬೇತಿಯ ವೈಶಿಷ್ಟ್ಯ.
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved