ಯೋಗವಾಸಿಷ್ಠ – 234 ಶಮವೇ ನಿಜವಾದ ಸೌಂದರ್ಯ (2-13-56 ರಿಂದ 62)

                        ಮೋಕ್ಷವೆಂಬ ಪಟ್ಟಣದ ನಾಲ್ವರು ದ್ವಾರಪಾಲಕರನ್ನು ಕುರಿತಾಗಿ ವಿಸ್ತಾರವಾಗಿ ಹೇಳಲು ಶ್ರೀ ವಸಿಷ್ಠರು ಉಪಕ್ರಮಿಸಿದ್ದಾರೆ. ಶಮ, ವಿಚಾರ, ಸಂತೋಷ ಮತ್ತು ಸಾಧುಸಂಗಮಗಳು ಮೋಕ್ಷದ ನಾಲ್ಕು ದ್ವಾರಪಾಲಕರು.

ಯೋಗವಾಸಿಷ್ಠ – 233 ವ್ಯವಹಾರದಿಂದ ಬಾಧಕವಿಲ್ಲ (2-13-47 ರಿಂದ 55)

                 ಶ್ರೀ ವಸಿಷ್ಠರು ಬಹಳ ಮುಖ್ಯವಾದ ವಿಷಯವನ್ನು ಶ್ರೀರಾಮನಿಗೆ ತಿಳಿಸುತ್ತಿದ್ದಾರೆ. ಮನೋಜಯದಿಂದ ಕೇವಲೀಭಾವವನ್ನು ಪಡೆಯುವ ವಿಷಯವನ್ನು ಅವರು ಹೇಳುತ್ತಿದ್ದಾರೆ. ಯಾವುದೇ ಜನ್ಮದಲ್ಲಿ ಬಂದಿದ್ದರೂ, ಯಾವುದೇ ಶ್ರಮವನ್ನು ಮಾಡುತ್ತಿದ್ದರೂ ಮನೋಜಯದ ಬಗ್ಗೆ ಚಿಂತನೆ-ಪ್ರಯತ್ನ

ಯೋಗವಾಸಿಷ್ಠ – 232 ಕೇವಲೀಭಾವದ ಸಾಧನಗಳು (2-13-42 ರಿಂದ 46)

              ಕೇವಲೀಭಾವವು (ಕೈವಲ್ಯವು) ಯಾವುದರಿಂದ ದೊರೆಯುತ್ತದೆ ಎಂಬುದನ್ನು ಶ್ರೀ ವಸಿಷ್ಠರು ಹೇಳುತ್ತಿದ್ದಾರೆ. ಶ್ರವಣ-ಮನನ-ನಿದಿಧ್ಯಾಸನಗಳೆಂಬ ಪುರುಷಪ್ರಯತ್ನದ ಮೂಲಕ ಅದ್ವಿತೀಯಬ್ರಹ್ಮವನ್ನು ಕುರಿತಾದ ವಾಸನೆ (ಸಂಸ್ಕಾರ) ಗಳನ್ನು ಬೆಳೆಸಿಕೊಂಡು ಆ ವಾಸನೆಗಳ ಮೂಲಕವೇ ದ್ವೈತಪ್ರಪಂಚದ ವಾಸನೆಗಳನ್ನು ತೊಡೆದುಹಾಕಬೇಕು.

ಯೋಗವಾಸಿಷ್ಠ – 231 ಕೇವಲೀಭಾವ (2-13-36 ರಿಂದ 41)

                    ಮುಮುಕ್ಷು (ಮೋಕ್ಷವನ್ನು ಬಯಸುವವನು) ವು ಹೇಗೆ ಪ್ರಯತ್ನವನ್ನು ಆರಂಭಿಸಬೇಕೆಂಬುದನ್ನು ಶ್ರೀ ವಸಿಷ್ಠರು ಶ್ರೀರಾಮನಿಗೆ ಹೇಳುತ್ತಿದ್ದಾರೆ. ದೃಢವಾಗಿ ಆರಂಭವಾಗುವದೇ ದುರ್ಲಭ. ಸಾಮಾನ್ಯವಾಗಿ ಆರಂಭಿಸಿ ಸ್ಪಲ್ಪ ದೂರದಲ್ಲೇ ಕೈ ಬಿಡುವವರೇ

ಯೋಗವಾಸಿಷ್ಠ- 229  ಭೋಗಾಸಕ್ತರ ಸ್ನೇಹ ಬೇಡ (2-13-21 ರಿಂದ 28)

                           ಶ್ರೀ ವಸಿಷ್ಠರು ಶ್ರೀ ರಾಮನನ್ನು ನಿಮಿತ್ತವಾಗಿಟ್ಟುಕೊಂಡು ನಮಗೆ ಶ್ರೇಷ್ಠವಾದ ವಿಷಯಗಳನ್ನು ಕೊಡುತ್ತಿದ್ದಾರೆ. ಹಿಂದಿನ ಲೇಖನದಲ್ಲಿ ಹೇಳಿದಂತೆ ಮೂರ್ಖತನ ಅಜ್ಞಾನದ ಪರಾಕಾಷ್ಠೆಯಾಗಿದೆ. ಇನ್ನೊಬ್ಬರ ಮಾರ್ಗದರ್ಶನವನ್ನು

ಯೋಗವಾಸಿಷ್ಠ – 228 ಮೂರ್ಖತನಕ್ಕೆ ಪರಿಹಾರ (೨-೧೩, ೧೨ ರಿಂದ ೨೦)

ಶ್ರೀ ವಸಿಷ್ಠರು ಶ್ರೀರಾಮನಿಗೆ ತತ್ತ್ವೋಪದೇಶವನ್ನು ಮಾಡುತ್ತಿದ್ದಾರೆ. ತನ್ನ ಅನುಭವ, ಶಾಸ್ತ್ರವಾಕ್ಯ ಮತ್ತು ಗುರುವಾಕ್ಯಗಳು ಯಾವಾತನಲ್ಲಿ ಒಂದೇ ಆಗುತ್ತದೆಯೋ, ಅವನು ಬಲುಬೇಗ ಪರಮಾತ್ಮಸಾಕ್ಷಾತ್ಕಾರವನ್ನು ಪಡೆಯುತ್ತಾನೆ. ಆದ್ದರಿಂದ ಸಾಧಕನು ತನಗೆ ಆಗುತ್ತಿರುವ ಅನುಭವಗಳನ್ನು ಶಾಸ್ತ್ರವಾಕ್ಯ ಮತ್ತು ಗುರುವಾಕ್ಯಗಳಿಗೆ ತಾಳೆ ನೋಡಿಕೊಳ್ಳುತ್ತಲೇ, ಆತ್ಮವಿಮರ್ಶೆ ಮಾಡಿಕೊಳ್ಳುತ್ತಲೇ ಮುಂದೆ