ಬಲವಾನಪ್ಯಶಕ್ತೋsಸೌ ಧನವಾನಪಿ ನಿರ್ಧನಃ| ಶ್ರುತವಾನಪಿ ಮೂರ್ಖಶ್ಚ ಯೋ ಧರ್ಮವಿಮುಖೋ ನರಃ || -ಭೋಜಪ್ರಬಂಧ ಯಾವನು ಧರ್ಮಬಾಹಿರ(ಧರ್ಮಭ್ರಷ್ಟ)ನೋ ಅವನು ಬಲಶಾಲಿಯಾದರೂ ದುರ್ಬಲನೇ, ಹಣವಂತನಾದರೂ ಬಡವನೇ, ವಿದ್ಯಾವಂತನಾದರೂ ಮೂರ್ಖನೇ ಸರಿ. ಎಲ್ಲಕ್ಕಿಂತಲೂ ಮಿಗಿಲಾದದ್ದು ಧರ್ಮಾಚರಣೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

 ಪಾತ್ರಾಪಾತ್ರವಿವೇಕೊsಸ್ತಿ ಧೇನುಪನ್ನಗಯೋರಿವ| ತೃಣಾತ್ಸಂಜಾಯತೇ ಕ್ಷೀರಂ ಕ್ಷೀರಾತ್ಸಂಜಾಯತೇ ವಿಷಮ್|| -ಸುಭಾಷಿತರತ್ನಭಾಂಡಾಗಾರ ಸತ್ಪಾತ್ರರಿಗೂ, ಅಪಾತ್ರರಿಗೂ ವೈಲಕ್ಷಣ್ಯ(ಭೇದ) ಇದ್ದೇ ಇದೆ. ಹೇಗೆಂದರೆ ಹುಸು ಮತ್ತು ಹಾವಿನ ನಡುವೆ ಇರುವಂತೆ. ಹಸುವಿಗೆ ಹಲ್ಲನ್ನು ನೀಡಿ(ದಾನಮಾಡಿ)ದರೂ ಹಾಲು ದೊರೆಯುತ್ತದೆ. ಹಾವಿಗೆ ಹಾಲನ್ನು ನೀಡಿ(ದಾನಮಾಡಿ)ದರೂ ವಿಷವೇ ಸಿಗುತ್ತದೆ. ಹಾಗಾಗಿ ದಾನಮಾಡುವಾಗ

ಪ್ರಿಯೇ ನಾತಿಭೃಶಂ ಹೃಷ್ಯೇತ್ ಅಪ್ರಿಯೇ ನ ಚ ಸಂಜ್ವರೇತ್ | ನ ಮುಹ್ಯೇದರ್ಥಚ್ಛಿದ್ರೇಷು ನ ಚ ಧರ್ಮಂ ಪರಿತ್ಯಜೇತ್ || -ಮಹಾಭಾರತ ವನ, ೨೦೭-೪೩ ಪ್ರಿಯವಾದದ್ದು ಘಟಿಸಿದಾಗ ಅತಿಯಾಗಿ ಸಂತೋಷಪಡಬಾರದು. ಅಪ್ರಿಯವು ಒದಗಿದಾಗ ಬಹಳ ಖಿನ್ನವಾಗಬಾರದು. ಹಣದ ಮುಗ್ಗಟ್ಟು ಒದಗಿದಾಗ ಬುದ್ಧಿಯನ್ನು

ಪಠಕಾಃ ಪಾಠಕಾಶ್ಚೈವ ಯೇ ಚಾನ್ಯೇ ಶಾಸ್ತ್ರ ಚಿಂತಕಾಃ | ಸರ್ವೇ ವ್ಯಸನಿನೋ ಮೂರ್ಖಾಃ ಯಃ ಕ್ರಿಯಾವಾನ್ ಸ ಪಂಡಿತಃ || -ಮಹಾಭಾರತ, ವನ,೩೧೩-೧೧೦ ಓದುವವರು, ಓದಿಸುವವರು ಮತ್ತು ಶಾಸ್ತ್ರ ವಿಷಯಗಳನ್ನು ಚಿಂತನೆಯನ್ನು ಮಾಡುವ ಇತರರು,  ಶಾಸ್ತ್ರ ಹೇಳಿದ್ದನ್ನು ಸ್ವತಃ ಅನುಷ್ಠಾನ ಮಾಡದೇ,

ಪರಾನ್ನಂ ಚ ಪರಸ್ವಂ ಚ ಪರಶಯ್ಯಾ ಪರಸ್ತ್ರಿಯಃ | ಪರವೇಶ್ಮನಿ ವಾಸಶ್ಚ ಶಕ್ರಸ್ಯಾಪಿ ಶ್ರಿಯಂ ಹರೇತ್ || -ಗರುಡಪುರಾಣ,೧-೧೧೫-೫ ಪರಾನ್ನ, ಪರಧನ, ಪರರಹಾಸಿಗೆ,ಪರಸ್ತ್ರೀ, ಪರಗೃಹವಾಸ- ಇವು ದೇವೇಂದ್ರನ ಸಂಪತ್ತನ್ನೂ ಸಹ ನಾಶಮಾಡಬಲ್ಲವು. (ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ)

ದಿನಕ್ಕೊಂದು ಸುಭಾಷಿತ-777

ಪಿಪೀಲಿಕಾರ್ಜಿತಂ ಧಾನ್ಯಂ ಮಕ್ಷಿಕಾಸಂಚಿತಂ ಮಧು | ಲುಬ್ಧೇನ ಸಂಚಿತಂ ದ್ರವ್ಯಂ ಸಮೂಲಂ ಚ ವಿನಶ್ಯತಿ || -ಸುಭಾಷಿತರತ್ನಭಾಂಡಾಗಾರ ಇರುವೆಗಳು ಕೂಡಿಟ್ಟ ಧಾನ್ಯ, ಜೇನ್ನೊಣಗಳು ಕೂಡಿಟ್ಟ ಜೇನುತುಪ್ಪ, ಜಿಪುಣನು ಕೂಡಿಟ್ಟ ಹಣ- ಇವೆಲ್ಲವೂ ಬುಡಸಹಿತ ನಾಶಹೊಂದುತ್ತವೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ದಿನಕ್ಕೊಂದು ಸುಭಾಷಿತ-776

ಮೂರ್ಖೇಣ ಸಹ ಸಂಯೋಗಃ ವಿಷಾದಪಿ ಸುದುರ್ಜರಃ: | ವಿಜ್ಞೇನ(ವಿದುಷಾ) ಸಹ ಸಂಯೋಗಃ ಸುಧಾರಸಸಮಃ ಸ್ಮೃತಃ ||   -ದೇವೀಭಾಗವತ, ೧-೬-೫ ಮೂರ್ಖನ ಸಹವಾಸ ವಿಷಕ್ಕಿಂತ ವಿಷಮವಾದದ್ದು. ವಿದ್ವಾಂಸನ ಸಹವಾಸ ಅಮೃತರಸಕ್ಕೆ ಸಮಾನವಾದದ್ದು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ದಿನಕ್ಕೊಂದು ಸುಭಾಷಿತ-775

ಇಂದ್ರಿಯೈರ್ವಿಷಯಾಕೃಷ್ಟೈಃ ಆಕ್ಷಿಪ್ತಂ ಧ್ಯಾಯತಾಂ ಮನಃ | ಚೇತನಾಂ ಹರತೇ ಬುದ್ದೇಃ ಸ್ತಮಬಸ್ತೋಯಮಿವ ಹ್ರದಾತ್ || ಭಾಗವತ, ೪-೨೨-೩೦ ವಿಷಯಸುಖಗಳ ಆಕರ್ಷಣೆಗೊಳಪಟ್ಟ ಇಂದ್ರಿಯಗಳಿಂದ ಧ್ಯಾನಮಾಡುವವರ ಮನಸ್ಸು ಚಂಚಲವಾಗುತ್ತದೆ. ಮಾತ್ರವಲ್ಲ ಆ ಮನಸ್ಸು ಜೊಂಡುಹುಲ್ಲು ಮಡುವಿನಿಂದ(ಕೆರೆಯಿಂದ) ನೀರನ್ನು ಹೀರುವಂತೆ ಬುದ್ಧಿಯ ಚೈತನ್ಯ ಶಕ್ತಿಯನ್ನು ಅಪಹರಿಸುತ್ತದೆ.

ದಿನಕ್ಕೊಂದು ಸುಭಾಷಿತ-774

ನಾಮುತ್ರ ಹಿ ಸಹಾಯಾರ್ಥಂ ಪಿತಾ ಮಾತಾ ಚ ತಿಷ್ಠತಃ | ನ ಪುತ್ರದಾರಾ ನ ಜ್ಞಾತಿಃ ಧರ್ಮಸ್ತಿಷ್ಠತಿ ಕೇವಲಃ || ಮನುಸ್ಮೃತಿ, ೪-೨೩೯ ತಂದೆ, ತಾಯಿ, ಮಕ್ಕಳು, ಪತ್ನಿ, ನೆಂಟರು ,ದಾಯಾದಿಗಳು ಯಾರೂ ಕೂಡ ಪರಲೋಕದಲ್ಲಿ ಸಹಾಯ ಮಾಡಲಾರರು. ಪರಲೋಕದಲ್ಲಿ ಧರ್ಮವೊಂದೇ

ದಿನಕ್ಕೊಂದು ಸುಭಾಷಿತ-773

ನಾಪೇಕ್ಷಾ ನ ಚ ದಾಕ್ಷಿಣ್ಯಂ ನ ಪ್ರೀತಿರ್ನ ಚ ಸಂಗತಿಃ | ತಥಾsಪಿ ಹರತೇ ತಾಪಂ ಲೋಕಾನಾಮುನ್ನತೋ ಘನಃ || ಭಾಮಿನೀವಿಲಾಸ, ೧-೩೭ ಮೋಡಕ್ಕೆ ಯಾವ ಅಪೆಕ್ಷೆಯೂ ಇಲ್ಲ, ದಾಕ್ಷಿಣ್ಯವಿಲ್ಲ. ಪ್ರೀತಿಗೋಸ್ಕರವೂ ಅಲ್ಲ. ಜೊತೆಗಾರನೂ ಅಲ್ಲ. ಆದರೂ ಮೋಡ ತನ್ನದೇ ಆದ