ಅರ್ಥಾನಾಮಾರ್ಜನೇ ದುಃಖಂ ಅರ್ಜಿತಾನಾಂ ಚ ರಕ್ಷಣೇ | ಆಯೇ ದುಃಖಂ ವ್ಯಯೇ ದುಃಖಂ ಧಿಗರ್ಥಾಃ ಕಷ್ಟಸಂಶ್ರಯಾಃ || -ಪಂಚತಂತ್ರ, ಮಿತ್ರಭೇದ-೧೭೪ ಹಣದ ಸಂಪಾದನೆಯಲ್ಲಿ ದುಃಖ; ಸಂಪಾದಿಸಿರುವುದರ ರಕ್ಷಣೆಯಲ್ಲಿಯೂ ದುಃಖವೇ. ಆದಾಯದಲ್ಲಿ ದುಃಖ, ವೆಚ್ಚದಲ್ಲಿಯೂ ದುಃಖ. ಯಾವಾಗಲೂ ಕಷ್ಟ(ದುಃಖ)ಗಳಿಂದಲೇ ಕೂಡಿರುವ ಈ ಐಶ್ವರ್ಯಕ್ಕೆ

ವ್ಯಾಧೇಸ್ತತ್ವಪರಿಜ್ಞಾನಂ ವೇದನಾಯಾಶ್ಚ ನಿಗ್ರಹಃ | ಏತದ್ವೈದ್ಯಸ್ಯ ವೈದ್ಯತ್ವಂ ನ ವೈದ್ಯ ಪ್ರಭುರಾಯಷಃ || -ಸಮಯೋಚಿತಪದ್ಯಮಾಲಿಕಾ ವ್ಯಾಧಿಯ ಸ್ವರೂಪವನ್ನು ಸರಿಯಾಗಿ ತಿಳಿಯುವುದು , ರೋಗಿಗೆ ಆಗುವ ಯಾತನೆಯನ್ನು ತಡೆಯುವುದು-  ಇವು ವೈದ್ಯನ ವೈದ್ಯತ್ವ {ವೈದ್ಯನ ಕರ್ತವ್ಯ}. ಅಂದಮಾತ್ರಕ್ಕೆ ವೈದ್ಯನೇ ಆಯುಸ್ಸಿಗೆ ಸ್ವಾಮಿಯಲ್ಲ –

ಲೋಕಯಾತ್ರಾರ್ಥಮೇವೇಹ ಧರ್ಮಸ್ಯ ನಿಯಮಃ ಕೃತಃ | ಉಭಯತ್ರ ಸುಖೋದರ್ಕಃ ಇಹ ಚೈವ ಪರತ್ರ ಚ || -ಮಹಾಭಾರತ. ಧರ್ಮದ ನಿಯಮವನ್ನು ನಿಗದಿ ಮಾಡಿರುವುದು ಲೋಕಯಾತ್ರೆಯು ಚೆನ್ನಾಗಿ ನಡೆಯಲೆಂದೇ.  ಧರ್ಮದ ನಿಯಮದಿಂದ {ನಿಯಮಪಾಲನೆಯಿಂದ} ಇಹ,  ಪರ ಎರಡೂ ಕಡೆಯೂ ಸುಖವಿದೆ. (ಸಂಗ್ರಹ: ಶ್ರೀ

ಅಹೋ ತಮ ಇವೇದಂ ಸ್ಯಾತ್ ನ ಪ್ರಜ್ಞಾಯೇತ ಕಿಂಚನ | ರಾಜಾ ಚೇನ್ನ ಭವೇಲ್ಲೋಕೇ ವಿಭಜನ್ ಸಾಧ್ವಸಾಧುನೀ || ರಾಮಾಯಣ, ಅಯೋಧ್ಯಾ, ೬೭-೩೬ ಸರಿತಪ್ಪುಗಳನ್ನು ಸರಿಯಾಗಿ ವಿಂಗಡಿಸದ(ಗ್ರಹಿಸದ) ರಾಜನು ಲೋಕದಲ್ಲಿಲ್ಲದಿದ್ದರೆ , ಯಾವದು ಏನೂ ತಿಳಿಯದೇ ಹೋದೀತು! ಹಾಗೆಯೇ ಎಲ್ಲೆಡೆಯೂ ಕತ್ತಲೆಯೇ 

ಯಥಾ ಹಿ ರಶ್ಮಯೋsಶ್ವಸ್ಯ ದ್ವಿರದಸ್ಯಾಂಕುಶೋ ಯಥಾ | ನರೇಂದ್ರಧರ್ಮೋ ಲೋಕಸ್ಯ  ತಥಾ ಪ್ರಗ್ರಹಣಂ ಸ್ಮೃತಮ್ || ಮಹಾಭಾರತ, ಶಾಂತಿ, ೫೬-೫ ಕುದುರೆಗೆ ಲಗಾಮು ಹೇಗೋ , ಆನೆಗೆ ಅಂಕುಶವು ಹೇಗೋ ಹಾಗೆ ರಾಜಧರ್ಮವು ಲೋಕವನ್ನು ಹತೋಟಿಗೊಳಿಸುವ (ಲೋಕವು=ಪ್ರಜೆಗಳು ಸರಿದಾರಿಯಲ್ಲಿ ಹೋಗುತ್ತಿರುವಂತೆ ನಿಯಂತ್ರಿಸುವ)

ಯತ್ರ ಸ್ತ್ರೀ ಯತ್ರ ಕಿತವೋ ಬಾಲೋ ಯತ್ರಾನುಶಾಸಿತಾ| ಮಜ್ಜಂತಿ ತೇsಶಾ ರಾಜನ್ ನದ್ಯಾಮಶ್ಮಪ್ಲವಾ ಇವ|| ಮಹಾಭಾರತ, ಉದ್ಯೋಗ, ೩೮-೪೩ ಧರ್ಮರಾಯ, ಎಲ್ಲಿ ತಿಳುವಳಿಕೆ ಇಲ್ಲದ ಮಹಿಳೆ ಅಥವಾ ಚಾಡಿಕೋರ ಅಥವಾ ಬಾಲಕನು ಅಧಿಪತಿಯಾಗಿ ಆಜ್ಞೆಯನ್ನು ಹೊರಡಿಸುವರೋ ಆವಾಗ ಅಲ್ಲಿರುವ ಜನರು ಪರಾಧೀನರಾಗಿ

ತ್ವದ್ಯಾತ್ರಯಾ ವ್ಯಾಪಕತಾ ಹತಾ ತೇ| ಸ್ತುತ್ಯಾ ಮಯಾ ವಾಕ್ಪರತಾ ಹತಾ ತೇ| ಧ್ಯಾನೇನ ಚೇತಃಪರತಾ ಹತಾ ತೇ| ಕ್ಷಮಸ್ವ ನಿತ್ಯಂ ತ್ರಿವಿಧಾಪರಾಧಮ್|| ನಿನ್ನ ದರ್ಶನಕ್ಕಾಗಿ ನಾನು ಮಾಡಿದ ಯಾತ್ರೆಯಿಂದ ನಿನ್ನ ಸರ್ವವ್ಯಾಪಕತ್ವವು ನನ್ನಿಂದ ನಾಶವಾಯಿತು.(ಗ್ರಹಿಸಲ್ಪಡಲಿಲ್ಲ.) ನಿನ್ನನ್ನು ಸ್ತುತಿಸಲು ತೊಡಗಿದೆ. ಆವಾಗ ನಾಲಿಗೆಯಲ್ಲಿ

ಯಃ ಸ್ವಭಾವೋ ಹಿ ಯಸ್ಯಾಸ್ತಿ ಸ ನಿತ್ಯಂ ದುರತಿಕ್ರಮಃ | ಶ್ವಾ ಯದಿ ಕ್ರಿಯತೇ ರಾಜಾ ಸ ಕಿಂ ನಾಶ್ನಾತ್ಯುಪಾನಹಮ್ || -ಸಮಯೋಚಿತ ಪದ್ಯರತ್ನಮಾಲಿಕಾ ಯಾವುದು ಯಾರಿಗೆ ಹುಟ್ಟು ಸ್ವಭಾವವಾಗಿದೆಯೋ ಅದನ್ನು ಅವರು ಎಂದಿಗೂ ಮೀರಿ ನೆಡೆಯಲಾರರು. ನಾಯಿಯನ್ನು ರಾಜನನ್ನಾಗಿ ಮಾಡಿದರೆ,ಅದು

ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಶ್ಚಿಕದಂಶನಮ್ | ತನ್ಮಧ್ಯೇ ಭೂತಸಂಚಾರಃ ಯದ್ವಾ ತದ್ವಾ ಭವಿಷ್ಯತಿ || -ಸಮಯೋಚಿತಪದ್ಯಮಾಲಿಕಾ ಮೊದಲೇ ಕೋತಿ! ಅದು ಹೆಂಡವನ್ನು ಕುಡಿಯಿತು. ಅಮೇಲೆ ಆ ಕೋತಿಗೆ ಚೇಳು ಕುಟಕಿತು. ತರುವಾಯ ದೆವ್ವ ಹಿಡಿದುಕೊಂಡಿತು! ಇನ್ನು ಹೇಳುವುದೇನಿದೆ? ಹುಚ್ಚಾಪಟ್ಟೆ ಹಾರಾಟ ನಡೆಯುವುದು!

ಬುಧಾಗ್ರೇ ನ ಗುಣಾನ್ ಬ್ರೂಯಾತ್ | ಸಾಧು ವೇತ್ತಿ ಯತಃ ಸ್ವಯಮ್ || ಮೂರ್ಖಾಗ್ರೇsಪಿ ಚ ನ ಬ್ರೂಯಾತ್ | ಬುಧಪ್ರೋಕ್ತಂ ನ ವೇತ್ತಿ ಸಃ || -ಭೋಜಪ್ರಬಂಧ ಪಂಡಿತನೆದುರಿಗೆ *ಗುಣಗಳನ್ನು* ವಿವರಿಸಬೇಕಾಗಿಲ್ಲ. ಏಕೆಂದರೆ ಅವನು ಅವುಗಳನ್ನು ಚೆನ್ನಾಗಿ ಬಲ್ಲ. ಮೂರ್ಖನೆದುರಿಗೂ