ಯಥಾ ಹಿ ರಶ್ಮಯೋsಶ್ವಸ್ಯ ದ್ವಿರದಸ್ಯಾಂಕುಶೋ ಯಥಾ | ನರೇಂದ್ರಧರ್ಮೋ ಲೋಕಸ್ಯ  ತಥಾ ಪ್ರಗ್ರಹಣಂ ಸ್ಮೃತಮ್ || ಮಹಾಭಾರತ, ಶಾಂತಿ, ೫೬-೫ ಕುದುರೆಗೆ ಲಗಾಮು ಹೇಗೋ , ಆನೆಗೆ ಅಂಕುಶವು ಹೇಗೋ ಹಾಗೆ ರಾಜಧರ್ಮವು ಲೋಕವನ್ನು ಹತೋಟಿಗೊಳಿಸುವ (ಲೋಕವು=ಪ್ರಜೆಗಳು ಸರಿದಾರಿಯಲ್ಲಿ ಹೋಗುತ್ತಿರುವಂತೆ ನಿಯಂತ್ರಿಸುವ)

ಯತ್ರ ಸ್ತ್ರೀ ಯತ್ರ ಕಿತವೋ ಬಾಲೋ ಯತ್ರಾನುಶಾಸಿತಾ| ಮಜ್ಜಂತಿ ತೇsಶಾ ರಾಜನ್ ನದ್ಯಾಮಶ್ಮಪ್ಲವಾ ಇವ|| ಮಹಾಭಾರತ, ಉದ್ಯೋಗ, ೩೮-೪೩ ಧರ್ಮರಾಯ, ಎಲ್ಲಿ ತಿಳುವಳಿಕೆ ಇಲ್ಲದ ಮಹಿಳೆ ಅಥವಾ ಚಾಡಿಕೋರ ಅಥವಾ ಬಾಲಕನು ಅಧಿಪತಿಯಾಗಿ ಆಜ್ಞೆಯನ್ನು ಹೊರಡಿಸುವರೋ ಆವಾಗ ಅಲ್ಲಿರುವ ಜನರು ಪರಾಧೀನರಾಗಿ

ತ್ವದ್ಯಾತ್ರಯಾ ವ್ಯಾಪಕತಾ ಹತಾ ತೇ| ಸ್ತುತ್ಯಾ ಮಯಾ ವಾಕ್ಪರತಾ ಹತಾ ತೇ| ಧ್ಯಾನೇನ ಚೇತಃಪರತಾ ಹತಾ ತೇ| ಕ್ಷಮಸ್ವ ನಿತ್ಯಂ ತ್ರಿವಿಧಾಪರಾಧಮ್|| ನಿನ್ನ ದರ್ಶನಕ್ಕಾಗಿ ನಾನು ಮಾಡಿದ ಯಾತ್ರೆಯಿಂದ ನಿನ್ನ ಸರ್ವವ್ಯಾಪಕತ್ವವು ನನ್ನಿಂದ ನಾಶವಾಯಿತು.(ಗ್ರಹಿಸಲ್ಪಡಲಿಲ್ಲ.) ನಿನ್ನನ್ನು ಸ್ತುತಿಸಲು ತೊಡಗಿದೆ. ಆವಾಗ ನಾಲಿಗೆಯಲ್ಲಿ

ಯಃ ಸ್ವಭಾವೋ ಹಿ ಯಸ್ಯಾಸ್ತಿ ಸ ನಿತ್ಯಂ ದುರತಿಕ್ರಮಃ | ಶ್ವಾ ಯದಿ ಕ್ರಿಯತೇ ರಾಜಾ ಸ ಕಿಂ ನಾಶ್ನಾತ್ಯುಪಾನಹಮ್ || -ಸಮಯೋಚಿತ ಪದ್ಯರತ್ನಮಾಲಿಕಾ ಯಾವುದು ಯಾರಿಗೆ ಹುಟ್ಟು ಸ್ವಭಾವವಾಗಿದೆಯೋ ಅದನ್ನು ಅವರು ಎಂದಿಗೂ ಮೀರಿ ನೆಡೆಯಲಾರರು. ನಾಯಿಯನ್ನು ರಾಜನನ್ನಾಗಿ ಮಾಡಿದರೆ,ಅದು

ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಶ್ಚಿಕದಂಶನಮ್ | ತನ್ಮಧ್ಯೇ ಭೂತಸಂಚಾರಃ ಯದ್ವಾ ತದ್ವಾ ಭವಿಷ್ಯತಿ || -ಸಮಯೋಚಿತಪದ್ಯಮಾಲಿಕಾ ಮೊದಲೇ ಕೋತಿ! ಅದು ಹೆಂಡವನ್ನು ಕುಡಿಯಿತು. ಅಮೇಲೆ ಆ ಕೋತಿಗೆ ಚೇಳು ಕುಟಕಿತು. ತರುವಾಯ ದೆವ್ವ ಹಿಡಿದುಕೊಂಡಿತು! ಇನ್ನು ಹೇಳುವುದೇನಿದೆ? ಹುಚ್ಚಾಪಟ್ಟೆ ಹಾರಾಟ ನಡೆಯುವುದು!

ಬುಧಾಗ್ರೇ ನ ಗುಣಾನ್ ಬ್ರೂಯಾತ್ | ಸಾಧು ವೇತ್ತಿ ಯತಃ ಸ್ವಯಮ್ || ಮೂರ್ಖಾಗ್ರೇsಪಿ ಚ ನ ಬ್ರೂಯಾತ್ | ಬುಧಪ್ರೋಕ್ತಂ ನ ವೇತ್ತಿ ಸಃ || -ಭೋಜಪ್ರಬಂಧ ಪಂಡಿತನೆದುರಿಗೆ *ಗುಣಗಳನ್ನು* ವಿವರಿಸಬೇಕಾಗಿಲ್ಲ. ಏಕೆಂದರೆ ಅವನು ಅವುಗಳನ್ನು ಚೆನ್ನಾಗಿ ಬಲ್ಲ. ಮೂರ್ಖನೆದುರಿಗೂ

ಬಲವಾನಪ್ಯಶಕ್ತೋsಸೌ ಧನವಾನಪಿ ನಿರ್ಧನಃ| ಶ್ರುತವಾನಪಿ ಮೂರ್ಖಶ್ಚ ಯೋ ಧರ್ಮವಿಮುಖೋ ನರಃ || -ಭೋಜಪ್ರಬಂಧ ಯಾವನು ಧರ್ಮಬಾಹಿರ(ಧರ್ಮಭ್ರಷ್ಟ)ನೋ ಅವನು ಬಲಶಾಲಿಯಾದರೂ ದುರ್ಬಲನೇ, ಹಣವಂತನಾದರೂ ಬಡವನೇ, ವಿದ್ಯಾವಂತನಾದರೂ ಮೂರ್ಖನೇ ಸರಿ. ಎಲ್ಲಕ್ಕಿಂತಲೂ ಮಿಗಿಲಾದದ್ದು ಧರ್ಮಾಚರಣೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

 ಪಾತ್ರಾಪಾತ್ರವಿವೇಕೊsಸ್ತಿ ಧೇನುಪನ್ನಗಯೋರಿವ| ತೃಣಾತ್ಸಂಜಾಯತೇ ಕ್ಷೀರಂ ಕ್ಷೀರಾತ್ಸಂಜಾಯತೇ ವಿಷಮ್|| -ಸುಭಾಷಿತರತ್ನಭಾಂಡಾಗಾರ ಸತ್ಪಾತ್ರರಿಗೂ, ಅಪಾತ್ರರಿಗೂ ವೈಲಕ್ಷಣ್ಯ(ಭೇದ) ಇದ್ದೇ ಇದೆ. ಹೇಗೆಂದರೆ ಹುಸು ಮತ್ತು ಹಾವಿನ ನಡುವೆ ಇರುವಂತೆ. ಹಸುವಿಗೆ ಹಲ್ಲನ್ನು ನೀಡಿ(ದಾನಮಾಡಿ)ದರೂ ಹಾಲು ದೊರೆಯುತ್ತದೆ. ಹಾವಿಗೆ ಹಾಲನ್ನು ನೀಡಿ(ದಾನಮಾಡಿ)ದರೂ ವಿಷವೇ ಸಿಗುತ್ತದೆ. ಹಾಗಾಗಿ ದಾನಮಾಡುವಾಗ

ಪ್ರಿಯೇ ನಾತಿಭೃಶಂ ಹೃಷ್ಯೇತ್ ಅಪ್ರಿಯೇ ನ ಚ ಸಂಜ್ವರೇತ್ | ನ ಮುಹ್ಯೇದರ್ಥಚ್ಛಿದ್ರೇಷು ನ ಚ ಧರ್ಮಂ ಪರಿತ್ಯಜೇತ್ || -ಮಹಾಭಾರತ ವನ, ೨೦೭-೪೩ ಪ್ರಿಯವಾದದ್ದು ಘಟಿಸಿದಾಗ ಅತಿಯಾಗಿ ಸಂತೋಷಪಡಬಾರದು. ಅಪ್ರಿಯವು ಒದಗಿದಾಗ ಬಹಳ ಖಿನ್ನವಾಗಬಾರದು. ಹಣದ ಮುಗ್ಗಟ್ಟು ಒದಗಿದಾಗ ಬುದ್ಧಿಯನ್ನು

ಪಠಕಾಃ ಪಾಠಕಾಶ್ಚೈವ ಯೇ ಚಾನ್ಯೇ ಶಾಸ್ತ್ರ ಚಿಂತಕಾಃ | ಸರ್ವೇ ವ್ಯಸನಿನೋ ಮೂರ್ಖಾಃ ಯಃ ಕ್ರಿಯಾವಾನ್ ಸ ಪಂಡಿತಃ || -ಮಹಾಭಾರತ, ವನ,೩೧೩-೧೧೦ ಓದುವವರು, ಓದಿಸುವವರು ಮತ್ತು ಶಾಸ್ತ್ರ ವಿಷಯಗಳನ್ನು ಚಿಂತನೆಯನ್ನು ಮಾಡುವ ಇತರರು,  ಶಾಸ್ತ್ರ ಹೇಳಿದ್ದನ್ನು ಸ್ವತಃ ಅನುಷ್ಠಾನ ಮಾಡದೇ,