ಗಿರಯೋ ಗುರವಸ್ತೇಭ್ಯೋsಪ್ಯುರ್ವೀ ಗುರ್ವೀ ತತೋsಪಿ ಜಗದಂಡಮ್ | ತಸ್ಮಾದಪ್ಯತಿಗುರವಃ ಪ್ರಲಯೇsಪ್ಯಚಲಾ ಮಹಾತ್ಮನಃ ||  ಸುಭಾಷಿತರತ್ನಭಾಂಡಾಗಾರ ಪರ್ವತಗಳು ದೊಡ್ಡವು. ಅವುಗಳಿಗಿಂತಲೂ ಭೂಮಿಯು ದೊಡ್ಡದು.  ಆದರೆ ಪ್ರಳಯಕಾಲದಲ್ಲಿಯೂ ಕೂಡ ಚಂಚಲರಾಗದೇ ಅಚಲರಾಗಿರುವ ಮಹಾತ್ಮರು ಇವೆಲ್ಲಕ್ಕಿಂತಲೂ ದೊಡ್ಡವರು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ನ ಹಿ ಧರ್ಮಾರ್ಥಸಿದ್ಧ್ಯರ್ಥಂ ಪಾನಮೇವಂ ಪ್ರಶಸ್ಯತೇ | ಪಾನಾದ್ತರ್ಥಶ್ಚ ಧರ್ಮಶ್ಚ ಕಾಮಶ್ಚ ಪರಿಹೀಯತೇ || -ರಾಮಾಯಣ, ಕಿಷ್ಕಿಂಧಾ,೩೩-೪೬ ಧರ್ಮಾರ್ಥಗಳನ್ನು ಸಾಧಿಸಬೇಕೆಂಬ ಉದ್ದೇಶ ಇರುವವರಿಗೆ ಮದಪಾನವು ಯೋಗ್ಯವಲ್ಲ. ಏಕೆಂದರೆ ಮದ್ಯಪಾನದಿಂದ ಧರ್ಮ, ಅರ್ಥ, ಕಾಮ- ಈ ಮೂರೂ ಕ್ಷೀಣಿಸುತ್ತವೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಪ್ರಜಾಸಂರಕ್ಷಣಂ ಧರ್ಮೋ ಧಾರ್ಮಿಕಸ್ಯ ಮಹೀಭೃತಃ| ತಸ್ಮಾದಸಾಧೂನ್ ಧರ್ಮಾಯ ನಿಘ್ನನ್ ದೋಷೈರ್ನ ಲಿಪ್ಯತೇ || -ಕೌಟಿಲ್ಯ ಧರ್ಮಿಷ್ಠನಾದ ಅರಸನು ಪ್ರಜೆಗಳನ್ನು ಕಾಪಾಡಬೇಕು. ಅದಕ್ಕಾಗಿ ದುಷ್ಟರನ್ನು ದಂಡಿಸಿದರೆ ಯಾವುದೇ ದೋಷವಿಲ್ಲ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಅದತ್ತೇತ್ಯಾಗತಾ ಲಜ್ಜಾ ದತ್ತೇತಿ ವ್ಯಥಿತಂ ಮನಃ | ಧರ್ಮಸ್ನೇಹಾಂತರೇ ನ್ಯಸ್ತಾಃ ದುಃಖಿತಾಃ ಖಲು ಮಾತೆಯ || ಬೆಳೆದ ಹೆಣ್ಣುಮಗಳು ಮಾದುವೆಯಾಗಲಿಲ್ಲವೆಂದರೆ ತಾಯಿಗೆ ನಾಚಿಕೆಯಾಗುತ್ತದೆ. ಮದುವೆಯಾದರೆ ಮಗಳ ಅಗಲಿಕೆಯಿಂದ ಮನಸ್ಸು ನೋಯುತ್ತದೆ. ಹೀಗಾಗಿ ಒಂದೆಡೆ ಕರ್ತವ್ಯ, ಇನ್ನೊಂದೆಡೆ  ಪ್ರೀತಿ, ಇವೆರಡರ ಮಧ್ಯೆ  ಸಿಲುಕಿದ

ವಿದ್ಯಾವಿಧಿವಿಹೀನೇನ ಕಿಂ ಕುಲೀನೇನ ದೇಹಿನಾಮ್ | ಅಕುಲೀನೋsಪಿ ವಿದ್ಯಾsಢ್ಯೋ ದೈವತೈರಪಿ ವಂದ್ಯತೇ || ಸತ್ಕುಲದಲ್ಲಿ ಜನಿಸಿದರೂ ವಿದ್ಯಾವಿಹೀನನಾಗಿದ್ದಲ್ಲಿ  ಏನು ಪ್ರಯೋಜನ?  ಕುಲಹೀನನಾದರೂ ವಿದ್ಯಾವಂತನನ್ನು ದೇವತೆಗಳು ಕೊಂಡಾಡುತ್ತಾರೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ದೌರ್ಭಾಗ್ಯಮಿಂದ್ರಿಯಾಣಾಂ ಕೃಷ್ಣೇ ವಿಷಯೇ ಹಿ ಶಾಶ್ವತಿಕೇ | ಕ್ಷಣಿಕೇಷು ಪಾಪಕರಣೇಷ್ವಪಿ ಯದನ್ಯವಿಷಯೇಷು ||    -ಭಕ್ತಿರಸಾಯನ ಈ ಇಂದ್ರಿಯಗಳಿಗೆ ಶಾಶ್ವತನಾದ ಶ್ರೀಕೃಷ್ಣನು ವಿಷಯವಾಗಿದ್ದರೂ, ಇಂದ್ರಿಯಗಳು ಕ್ಷಣಿಕವಾದ ಹಾಗೂ ಪಾಪಜನಕಗಳೂ ಆದ ಶಬ್ದಾದಿ (ಶ್ರೀಕೃಷ್ಣನನ್ನೂ ಹೊರತು ಪಡಿಸಿ)ಇತರ ವಿಷಯಗಳಲ್ಲಿ ಅನುರಕ್ತವಾಗುತ್ತವೆಯಲ್ಲ.; ಛೇ ಇದು

ಇತಃ ಕೋನ್ಯೋsಸ್ತಿ (ಕೋನ್ವಸ್ತಿ?) ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ | ದುರ್ಲಭಂ ಮಾನುಷಂ ಜನ್ಮ ಪ್ರಾಪ್ಯ ತತ್ರಾಪಿ ಪೌರುಷಮ್ ||  ವಿವೇಕಚೂಡಾಮಣಿ-೫ ದುರ್ಲಭವಾದ ಮನುಷ್ಯದೇಹವನ್ನು ಪಡೆದು, ಅದರಲ್ಲೂ ಪುರುಷಜನ್ಮವನ್ನು ಪಡೆದು , ತನ್ನ ಪರಮಸ್ವಾರ್ಥವಾದ ಮೋಕ್ಷದ ವಿಷಯದಲ್ಲಿ ಯಾವನು ಪ್ರಮಾದವನ್ನೆಸಗುವನೋ ಅವನಿಗಿಂತ

 ಶೋಕಸ್ಥಾನಸಹಸ್ರಾಣಿ ಹರ್ಷಸ್ಥಾನಶತಾನಿ ಚ | ದಿವಸೇ ದಿವಸೇ ಮೂಢಂ ಆವಿಶಂತಿ ನ ಪಂಡಿತಮ್ || -ಮಹಾಭಾರತ, ಶಾಂತಿ, ೨೫-೨೦ ಪ್ರತಿದಿನವೂ ಸಹಸ್ರಾರು ದುಃಖಗಳೂ, ನೂರಾರು ಸಂತೋಷದ ಸಂಗತಿಗಳೂ ಎಲ್ಲವೂ ಮೂರ್ಖನಿಗೇ ಬರುತ್ತವೆ, ಪಂಡಿತನಿಗಲ್ಲ. { ಸಮಚಿತ್ತನಾದರೆ ಸುಖದುಃಖಗಳ ಗೊಡವೆಯಿಲ್ಲ.} (ಸಂಗ್ರಹ: ಶ್ರೀಸ್ವರ್ಣವಲ್ಲೀ

ಶಿಶೌ ಪ್ರವಿಶತಃ ಪ್ರಾಯಃ ಪ್ರತಿವೇಶಿಗುಣಾಗುಣೌ | ಗಂಧೋsನ್ಯಸಂನಿಧೇರೇವ ಸಂಕ್ರಾಮತಿ ಸಮೀರಣೇ ||   – *ಹರಿಹರಸುಭಾಷಿತ, ೨-೫೧* ಬೀಸುತ್ತಿರುವ ಶುದ್ಧವಾದ ಗಾಳಿಯಲ್ಲಿ  ಅಕ್ಕಪಕ್ಕದ ವಸ್ತುಗಳ ಸುಗಂಧವೂ, ದುರ್ಗಂಧವೂ ಸೇರಿಕೊಳ್ಳುವ ಹಾಗೆ ಆಟವಾಡುವ ಚಿಕ್ಕ ಮಗುವಿನಲ್ಲಿ ನೆರಮನೆಯವರ ಸದ್ಗುಣಗಳೂ, ದುರ್ಗುಣಗಳೂ ಸಾಮಾನ್ಯವಾಗಿ ಸೇರಿಕೊಳ್ಳುತ್ತವೆ.

ಯಥಾ ಹ್ಯೇಕೆನ ಚಕ್ರೇಣ ನ ರಥಸ್ಯ ಗತಿರ್ಭವೇತ್ | ಏವಂ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ ||  -ಹಿತೋಪದೇಶ,೧-೨೦ ಒಂದೇ ಚಕ್ರದಿಂದ ಹೇಗೆ ರಥವು ಚಲಿಸಲಾರದೋ ಹಾಗೆಯೇ ಪುರುಷಪ್ರಯತ್ನವಿಲ್ಲದೇ ದೈವವು ಸಿದ್ಧಿಸುವುದಿಲ್ಲ. {ದೈವಾನುಗ್ರಹವು ಪುರುಷಪ್ರಯತ್ನವಿಲ್ಲದೇ ಲಭಿಸದು.} (ಸಂಗ್ರಹ: ಶ್ರೀವ್ಯಾಸ ಪ್ರತಿಷ್ಠಾನ