ಗಿರಯೋ ಗುರವಸ್ತೇಭ್ಯೋsಪ್ಯುರ್ವೀ ಗುರ್ವೀ ತತೋsಪಿ ಜಗದಂಡಮ್ | ತಸ್ಮಾದಪ್ಯತಿಗುರವಃ ಪ್ರಲಯೇsಪ್ಯಚಲಾ ಮಹಾತ್ಮನಃ ||  ಸುಭಾಷಿತರತ್ನಭಾಂಡಾಗಾರ ಪರ್ವತಗಳು ದೊಡ್ಡವು. ಅವುಗಳಿಗಿಂತಲೂ ಭೂಮಿಯು ದೊಡ್ಡದು.  ಆದರೆ ಪ್ರಳಯಕಾಲದಲ್ಲಿಯೂ ಕೂಡ ಚಂಚಲರಾಗದೇ ಅಚಲರಾಗಿರುವ ಮಹಾತ್ಮರು ಇವೆಲ್ಲಕ್ಕಿಂತಲೂ ದೊಡ್ಡವರು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಶಿಶಿರ ಸೌರಮಾಸ: ಮಕರ – 22 ಚ,ಮಾಸ : ಮಾಘ ಪಕ್ಷ :ಕೃಷ್ಣ ಪಕ್ಷ ತಿಥಿ : ಪಂಚಮಿ 8:05am ಚಂದ್ರನಕ್ಷತ್ರ: ಹಸ್ತ 10:28am

ನ ಹಿ ಧರ್ಮಾರ್ಥಸಿದ್ಧ್ಯರ್ಥಂ ಪಾನಮೇವಂ ಪ್ರಶಸ್ಯತೇ | ಪಾನಾದ್ತರ್ಥಶ್ಚ ಧರ್ಮಶ್ಚ ಕಾಮಶ್ಚ ಪರಿಹೀಯತೇ || -ರಾಮಾಯಣ, ಕಿಷ್ಕಿಂಧಾ,೩೩-೪೬ ಧರ್ಮಾರ್ಥಗಳನ್ನು ಸಾಧಿಸಬೇಕೆಂಬ ಉದ್ದೇಶ ಇರುವವರಿಗೆ ಮದಪಾನವು ಯೋಗ್ಯವಲ್ಲ. ಏಕೆಂದರೆ ಮದ್ಯಪಾನದಿಂದ ಧರ್ಮ, ಅರ್ಥ, ಕಾಮ- ಈ ಮೂರೂ ಕ್ಷೀಣಿಸುತ್ತವೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಶಿಶಿರ ಸೌರಮಾಸ: ಮಕರ – 21 ಚ,ಮಾಸ : ಮಾಘ ಪಕ್ಷ :ಕೃಷ್ಣ ಪಕ್ಷ ತಿಥಿ : ಚತುರ್ಥಿ  8:58am ಚಂದ್ರನಕ್ಷತ್ರ: ಉತ್ತರಾ 10:28am

ಪ್ರಜಾಸಂರಕ್ಷಣಂ ಧರ್ಮೋ ಧಾರ್ಮಿಕಸ್ಯ ಮಹೀಭೃತಃ| ತಸ್ಮಾದಸಾಧೂನ್ ಧರ್ಮಾಯ ನಿಘ್ನನ್ ದೋಷೈರ್ನ ಲಿಪ್ಯತೇ || -ಕೌಟಿಲ್ಯ ಧರ್ಮಿಷ್ಠನಾದ ಅರಸನು ಪ್ರಜೆಗಳನ್ನು ಕಾಪಾಡಬೇಕು. ಅದಕ್ಕಾಗಿ ದುಷ್ಟರನ್ನು ದಂಡಿಸಿದರೆ ಯಾವುದೇ ದೋಷವಿಲ್ಲ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಶಿಶಿರ ಸೌರಮಾಸ: ಮಕರ – 20 ಚ,ಮಾಸ : ಮಾಘ ಪಕ್ಷ :ಕೃಷ್ಣ ಪಕ್ಷ ತಿಥಿ :  ತದಿಗೆ10:36am ಚಂದ್ರನಕ್ಷತ್ರ: ಹುಬ್ಬ 11:24pm ರವಿನಕ್ಷತ್ರ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಶಿಶಿರ ಸೌರಮಾಸ: ಮಕರ – 19 ಚ,ಮಾಸ : ಮಾಘ ಪಕ್ಷ :ಕೃಷ್ಣ ಪಕ್ಷ ತಿಥಿ : ಬಿದಿಗೆ 12:54pm ಚಂದ್ರನಕ್ಷತ್ರ: ಮಘ 03:06pm

ಅದತ್ತೇತ್ಯಾಗತಾ ಲಜ್ಜಾ ದತ್ತೇತಿ ವ್ಯಥಿತಂ ಮನಃ | ಧರ್ಮಸ್ನೇಹಾಂತರೇ ನ್ಯಸ್ತಾಃ ದುಃಖಿತಾಃ ಖಲು ಮಾತೆಯ || ಬೆಳೆದ ಹೆಣ್ಣುಮಗಳು ಮಾದುವೆಯಾಗಲಿಲ್ಲವೆಂದರೆ ತಾಯಿಗೆ ನಾಚಿಕೆಯಾಗುತ್ತದೆ. ಮದುವೆಯಾದರೆ ಮಗಳ ಅಗಲಿಕೆಯಿಂದ ಮನಸ್ಸು ನೋಯುತ್ತದೆ. ಹೀಗಾಗಿ ಒಂದೆಡೆ ಕರ್ತವ್ಯ, ಇನ್ನೊಂದೆಡೆ  ಪ್ರೀತಿ, ಇವೆರಡರ ಮಧ್ಯೆ  ಸಿಲುಕಿದ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಶಿಶಿರ ಸೌರಮಾಸ: ಮಕರ – 18 ಚ,ಮಾಸ : ಮಾಘ ಪಕ್ಷ :ಕೃಷ್ಞ ಪಕ್ಷ ತಿಥಿ : ಪ್ರಥಮಾ03:44pm ಚಂದ್ರನಕ್ಷತ್ರ: ಆಶ್ಲೇಷಾ03:06pm ರವಿನಕ್ಷತ್ರ :ಶ್ರವಣ

ವಿದ್ಯಾವಿಧಿವಿಹೀನೇನ ಕಿಂ ಕುಲೀನೇನ ದೇಹಿನಾಮ್ | ಅಕುಲೀನೋsಪಿ ವಿದ್ಯಾsಢ್ಯೋ ದೈವತೈರಪಿ ವಂದ್ಯತೇ || ಸತ್ಕುಲದಲ್ಲಿ ಜನಿಸಿದರೂ ವಿದ್ಯಾವಿಹೀನನಾಗಿದ್ದಲ್ಲಿ  ಏನು ಪ್ರಯೋಜನ?  ಕುಲಹೀನನಾದರೂ ವಿದ್ಯಾವಂತನನ್ನು ದೇವತೆಗಳು ಕೊಂಡಾಡುತ್ತಾರೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)