Jeevana Shikshana Adyayana Shibhira

ಉಪನಯನವಾದ ವಟುಗಳಿಗೆ ಬೇಸಿಗೆಯ ರಜಾ ಅವಧಿಯಲ್ಲಿ ಯೋಗ, ಪ್ರಾಣಾಯಾಮ ಮುಂತಾದವುಗಳ ಜೊತೆಯಲ್ಲಿ ಮೂರು ವರ್ಷಗಳಲ್ಲಿ ಸಂಧ್ಯಾವಂದನೆ, ದೇವಪೂಜೆ, ಹಾಗೂ ಇನ್ನಿತರ ವೇದಮಂತ್ರಗಳನ್ನು ಗುರುಕುಲ ಮಾದರಿಯಲ್ಲಿ ಕಲಿಸುವುದು ಈ ಶಿಬಿರದ ಉದ್ದೇಶ. ೧೯೯೩ರಲ್ಲಿ ಪ್ರಾರಂಭಿಸಲ್ಪಟ್ಟ ಈ ಶಿಬಿರ ಪ್ರತಿವರ್ಷ ಸುಮಾರು ೧೮ ದಿನ ಶ್ರೀ ಸ್ವರ್ಣವಲ್ಲೀ ಮಠದಲ್ಲಿ ನಡೆಸಲ್ಪಡುತ್ತದೆ. ವ್ಯಕ್ತಿ ಯಾವುದೇ ವೃತ್ತಿ ಅಥವಾ ಉದ್ಯೋಗದಲ್ಲಿ ಇದ್ದರೂ, ಜಗತ್ತಿನ ಯಾವುದೇ ಭಾಗದಲ್ಲಿ ಇದ್ದರೂ ತನ್ನ ಪಾರಂಪರಿಕ ಆಚರಣೆಯನ್ನು ಉಳಿಸಿಕೊಂಡಿರಬೇಕು ಎನ್ನುವ ಮೂಲ ತಳಹದಿಯಲ್ಲಿ ಈ ತರಬೇತಿ ರೂಪಿಸಲಾಗಿದೆ.

ಆನುಭವಿ ಅಧ್ಯಾಪಕವೃಂದದವರು ಗುರುಕುಲ ಮಾದರಿಯ ಶಿಕ್ಷಣವನ್ನುಮಕ್ಕಳಿಗೆ ನೀಡುತ್ತಿರುದು ಮುಂದಿನ ಪೀಳಿಗೆಯ ಬಗೆಗೆ ನಮಗೆ ಹೆಮ್ಮೆಯುಂಟಾಗುತ್ತದೆ.ಶ್ರೀಮಠದಲ್ಲಿ ಕಲಿತ ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡರೆ ತಮ್ಮ ವ್ಯಕ್ತಿತ್ವವಿಕಾಸಕ್ಕೆ ನಾಂದಿಯಾಗುತ್ತದೆ.

ಸ್ವರ್ಣವಲ್ಲೀ ಮಠದಲ್ಲಿ ಪ್ರತಿವರ್ಷ ಜೀವನ ಶಿಕ್ಷಣ ಅಧ್ಯಯನ ಶಿಬಿರವನ್ನು ನಡೆಸುತ್ತ ಬರಲಾಗಿದೆ.ಬೇಸಿಗೆಯ ರಜೆಯಲ್ಲಿ ಬ್ರಹ್ಮೋಪದೇಶಪಡೆದ ವಿದ್ಯಾರ್ಥಿಗಳನ್ನು ಮಠದಲ್ಲಿ ಸೇರಿಸಿ ಅವರಿಗೆ ಇಪ್ಪತ್ತೊಂದು ದಿನಗಳ ಕಾಲ ಗುರುಕುಲ ಪದ್ಧತಿಯಲ್ಲಿ ಜೀವನ ಶಿಕ್ಷಣವನ್ನು ನೀಡಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳಿಗೆ ಶ್ರೀಮಠದಲ್ಲಿ ಊಟ ವಸತಿ ವ್ಯವಸ್ಥೆ ಮಾಡಿ ಅವರಿಗೆ ಯೋಗಾಸನ ವೇದಪಾಠ ಸಂಧ್ಯಾವಂದನೆ ವಿದ್ವಾಂಸರಿಂದ ಉಪನ್ಯಾಸ ಸ್ತೋತ್ರಪಾಠ, ಗೀತಪಾಠ, ಸಂಸ್ಕೃತಪಾಠ, ತರಬೇತಿಯನ್ನು ನೀಡಲಾಗುತ್ತದೆ.1992 ರಿಂದ ನಿರಂತರವಾಗಿ ನಡೆಸಿಕೊಂಡು ಬರಲಾದ ಈ ಜೀವನಕ್ಷಣ ತರಬೇತಿ ಶಿಬಿರ ತುಂಬ ಜನಪ್ರಿಯವಾಗಿದೆ. ಈ ಜೀವನ ಶಿಕ್ಷಣ ಅಧ್ಯಯನ ತರಬೇತಿ ಶಿಬಿರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಜೀವನಕ್ಕೆ ಬೇಕಾದ ಸಂಸ್ಕೃತಿ ಶಿಕ್ಷಣ ಪಡೆದಿದ್ದಾರೆ. ಇದೇ ರೀತಿ ವಿದ್ಯಾರ್ಥಿನಿಯರಿಗೂ ಕುಮಾರಿಕಾ ಜೀವನಶಿಕ್ಷಣ ತರಬೇತಿ ಅಧ್ಯಯನ ಶಿಬಿರ ಆರಂಭಿಸಲಾಗಿದ್ದು ಅದು ಕೂಡ ತುಂಬ ಯಶಸ್ವಿಯಾಗಿ ನಡೆಯುತ್ತಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳುವುದೆಂದರೆ ಮಕ್ಕಳಿಗೆ ಅಪರಿಮಿತ ಆನಂದ ಉತ್ಸಾಹ, ಗುರುಗಳನ್ನು ಪ್ರತಿನಿತ್ಯ ಕಂಡು ಅವರ ಉಪದೇಶ ಕೇಳಲು ಮಕ್ಕಳು ಉತ್ಸುಕರಾಗಿರುತ್ತಾರೆ. ಆನುಭವಿ ಅಧ್ಯಾಪಕವೃಂದದವರು ಗುರುಕುಲ ಮಾದರಿಯ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿರುದು ಮುಂದಿನ ಪೀಳಿಗೆಯ ಬಗೆಗೆ ನಮಗೆ ಹೆಮ್ಮೆಯುಂಟಾಗುತ್ತದೆ. ಶ್ರೀಮಠದಲ್ಲಿ ಕಲಿತ ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡರೆ ತಮ್ಮ ವ್ಯಕ್ತಿತ್ವವಿಕಾಸಕ್ಕೆ ನಾಂದಿಯಾಗುತ್ತದೆ.
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved